ಮಾರ್ಚ್‌ನಲ್ಲಿ ಕಂಠೀರವ
Posted date: 17/February/2010

ಈಗಾಗಲೇ ಎರಡು ಚಿತ್ರಗಳ ಮಾಲಾಶ್ರೀ ಅಭಿನಯದ ವೀರ ಚಿರಂಜೀವಿ ಸರ್ಜಾ ಅಭಿನಯದ ಗಂಡೆದೆ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಿರ್ಮಾಪಕ ರಾಮು ಈಗ ಮತ್ತೊಂದು ಚಿತ್ರದ ಚಿತ್ರೀಕರಣ ಆರಂಭಿಸಲು ಸಜ್ಜಾಗಿದ್ದಾರೆ.

ರಾಮು ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ನಿರ್ಮಾಪಕ ರಾಮು ಮತ್ತೊಂದು ಅದ್ದೂರಿ ಚಿತ್ರ ಕಂಠೀರವ ಆರಂಭಿಸಲಿದ್ದು, ಈ ಚಿತ್ರವು ಮಾರ್ಚ್‌ನಲ್ಲಿ ಆರಂಭವಾಗಲಿದೆ.

ದಾಸರಿ ಸೀನು ಛಾಯಾಗ್ರಹಣ, ದೀಪು ಎಸ್. ಇಉಮಾರ್ ಸಂಕಲನ ವಿರುವ ಈ ಚಿತ್ರದ ಸಂಭಾಷಣೆ ಮತ್ತು ನಿರ್ದೇಶನ ತುಷಾರ್ ರಂಗನಾಥ್.

ವಿಜಯ್ ಜೋಡಿಯಾಗಿ ರಿಷಿಕಾ (ರೋಹಿಣಿ) ಎಸ್.ವಿ. ರಾಜೇಂದ್ರಸಿಂಗ್ ಬಾಬುರವರ ಪುತ್ರಿ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗ ಪ್ರವೇಶಿಸಲಿದ್ದು, ದಿ: ಸಂಕರ್‌ಸಿಂಗ್‌ರ ಮೂರನೇ ತಲೆಮಾರಿನ ಮತ್ತೊಂದು ಕುಡಿ ಚಿತ್ರರಂಗ ಪ್ರವೇಶಿಸಿದಂತಾಗುತ್ತದೆ. ಇವರೊಂದಿಗೆ ಶುಭಾಪೂಜಾ ಮತ್ತೊಬ್ಬ ನಾಯಕಿ ಕಾಣಿಸಿಕೊಳ್ಳಲಿದ್ದಾರೆ.

ದಿನಾಂಕ: ೧೭.೦೨.೨೦೧೦.
ರಿಷಿಕಾ ಬಯೋಡೇಟಾ

ಹೆಸರು : ರಿಷಿಕಾ

ಮೂಲ ಹೆಸರು : ರೋಹಿಣಿ

ವಯಸ್ಸು : ೨೦ ವರ್ಷ

ವಿದ್ಯಾಭ್ಯಾಸ : ಬಿ.ಎಸ್ಸಿ (ಫ್ಯಾಷನ್ ಡಿಸೈನ್)
ಮೌಂಟ್ ಕಾರ್ಮಲ್ ಕಾಲೇಜ್,

ತಂದೆ ಹೆಸರು : ಎಸ್.ವಿ. ರಾಜೇಂದ್ರಸಿಂಗ್‌ಬಾಬು
ಹೆಸರಾಂತ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ
ವಿಜೇತ ನಿರ್ದೇಶಕರು.

ತಾಯಿಯ ಹೆಸರು : ಅನುರಾಧ ಸಿಂಗ್ (ಗೃಹಿಣಿ)

ಸಹೋದರ : ಆದಿತ್ಯ, (ನಾಯಕನಟ)

ವಿವರ : ನಿರ್ದೇಶಕ-ನಿರ್ಮಾಪಕ, ದಿ: ಶಂಕರ್ ಸಿಂಗ್ ಹಾಗೂ
ಹಿರಿಯ ನಟಿ ಪ್ರತಿಮಾ ದೇವಿ ಪುತ್ರ ಎಸ್.ವಿ. ರಾಜೇಂದ್ರ
ಸಿಂಗ್ ಬಾಬು ರವರ ಪುತ್ರಿ. ಅತ್ತೆ ವಿಜಯಲಕ್ಷ್ಮಿ ಸಿಂಗ್ ಕೂಡ ನಟಿಯಾಗಿ - ನಿರ್ಮಾಪಕಿಯಾಗಿ, ಕಾಸ್ಟ್ಯೂಮ್ ಡಿಸೈನರ್‌ಆಗಿ, ನಿರ್ದೇಶಕಿಯಾಗಿ ಚಿತ್ರರಂಗಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.

ಅಭಿನಯಕ್ಕೆ ಬೇಕಾಗುವ ಎಲ್ಲಾ ತರಬೇತಿಗಳನ್ನು ಮುಂಬೈನ ಕಿಶೋರ್ ನಮಿತ್‌ಕಪೂರ್ ಶಾಲೆಯಲ್ಲಿ ಆರು ತಿಂಗಳ ತರಬೇತಿಯನ್ನು ಪಡೆದಿರುತ್ತಾರೆ.

ನಿರ್ಮಾಪಕ ರಾಮುರವರ ವಿಜಯ್ ಅಭಿನಯದ ಕಂಠೀರವ ಚಿತ್ರದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed